ಹಾಲೆಂಡ್ 2025
ಈ ರೋಮಾಂಚಕ ಅನಿರೀಕ್ಷಿತ ಥ್ರಿಲ್ಲರ್‌ನಲ್ಲಿ, ನ್ಯಾನ್ಸಿ ವಾಂಡರ್‌ಗ್ರೂಟ್ ಪಾತ್ರ ಮಾಡುತ್ತಿರುವ ನಿಕೋಲ್ ಕಿಡ್ಮನ್, ಒಬ್ಬ ಶಿಕ್ಷಕಿ ಹಾಗೂ ಗೃಹಿಣಿಯಾಗಿದ್ದಾರೆ. ಮಿಚಿಗನ್‌ನ ಪುಷ್ಪ-ರಂಜಿತ ಹಾಲೆಂಡ್‌ನಲ್ಲಿ ತನ್ನ ಸಮುದಾಯ ಸ್ತಂಭವಾದ ಪತಿ ಮತ್ತು ಮಗನೊಂದಿಗೆ ಸಾಗುತ್ತಿರುವ ಅವರ ಪರಿಪೂರ್ಣ ಜೀವನ ತಿರುಚಿದ ಕಥೆಯಾಗಿ ತಿರುಗುತ್ತದೆ. ನ್ಯಾನ್ಸಿ ಮತ್ತವರ ಸ್ನೇಹಪರ ಸಹೋದ್ಯೋಗಿ ಒಂದು ರಹಸ್ಯವನ್ನು ಅನುಮಾನಿಸುತ್ತಾರೆ ಹಾಗೂ ಅವರ ಜೀವನದಲ್ಲಿ ಏನೂ ತಾವಂದುಕೊಂಡಂತಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾರೆ.